Analysis

ಲಿಯಾನ್ ಟ್ರಾಟ್‍ಸ್ಕಿ

ಲಿಯಾನ್ ಟ್ರಾಟ್ಸ್ಕಿ
ನಿರಂತರ ಸಮಾಜವಾದಿ ಕ್ರಾಂತಿಯ
ಪ್ರತಿಪಾದಕ




1940 ಆಗಸ್ಟ್ 20ರಂದು, ಎಂಬತ್ತು ವರುಷಗಳ ಹಿಂದೆ ಜೋಸೆಫ್‌ ಸ್ಟಾಲಿನ್ʼ ಗುಪ್ತಚರದಳ; ಜೆ.ಪಿ.ಯು ಕೊಲೆಗಾರ ʼರೇಮಾಂಡ್ ಮರ್ಕೆಡಾರ್ʼ ಲಿಯಾನ್ ಟ್ರಾಟ್ಸ್ಕಿಯವರ ತಲೆಗೆ ಮಂಜುಗಡ್ಡೆ ಮೀಟುವ ಕೈಗುದ್ದಲಿಯಿಂದ ಮರಾಣಾಂತಿಕವಾಗಿ ಹೊಡೆದದ್ದರಿಂದ, ಸ್ಟಾಲಿನ್ʼ ಮತ್ತು ಸ್ಟಾಲಿನ್ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ ಹಾಗು ಪ್ರಖರ ರಾಜಕೀಯ ವಿಮರ್ಶಕ, ಅಂದಿನ ಕಾಲದ ಪ್ರಧಾನ ಮಾರ್ಕ್ಸ್ವಾದಿ ಚಿಂತಕ ಮತ್ತು ಮಹಾನ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ ಮರುದಿನ ಆಗಸ್ಟ್ 21 ರಂದು ಕೊನೆಯುಸಿರುಳೆದರು. read more

Analysis

ಒಗ್ಗೂಡಿದ ಕಾರ್ಮಿಕರ ಹೋರಾಟಕ್ಕೆ ಸೋಲೆಂಬುದಿಲ್ಲ!

 

ಭಾರತದ ಶ್ರಮಜೀವಿಗಳು ಮತ್ತೊಮ್ಮೆ ಸಾರ್ವತ್ರಿಕ ಮುಷ್ಕರದ ಮೂಲಕ ಈ ದೇಶದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. “ಸುಧಾರಣೆಗಳು” ಎಂಬ ಮೋಸದ ಶೀರ್ಷಿಕೆಯಡಿ ಜಾರಿಯಾದ ನವ ಉದಾರೀಕರಣ ನೀತಿಗಳು, ಅಂದಿನಿಂದ ಇಂದಿನವರೆಗೂ ಈ ದೇಶದ ಮತ್ತು ವಿದೇಶದ ಬಂಡವಾಳಿಗರ ಗುಲಾಮಗಿರಿ ಮಾಡುತ್ತಾ ಭಾರತದ ೯೯% ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅಧೋಗತಿ ಮುಟ್ಟಿಸಿವೆ. ಕಳೆದ ಎರಡುವರೆ ದಶಕಗಳಲ್ಲಿ ೧೯ನೇ ಬಾರಿ ನಡೆಯುತ್ತಿರುವ ಈ ಜನರಲ್‌ ಸ್ಟ್ರೈಕ್‌, ದೊಡ್ಡ ಬಂಡವಾಳಿಗರ ಈ ಸಂಚನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಲು ಕಾರ್ಮಿಕ ಜನಸ್ತೋಮವನ್ನು ಅಣಿಗೊಳಿಸಿದೆ. read more

Analysis

ಲೋಕಸಭಾ ಚುನಾವಣೆ-2019

ಕರ್ನಾಟಕದ ಪ್ರಗತಿಪರತೆ ವಿಫಲವಾದದ್ದೆಲ್ಲಿ?

ಕಳೆದ ತಿಂಗಳು ಹೊರಬಿದ್ದ 2019ರ ಲೋಕಸಭಾ ಚುನಾವಣಾ ಫಲಿತಾಂಶ ಇಂದಿಗೂ ಚರ್ಚೆಯಲ್ಲಿದೆ. ದೇಶದ ಇತರೆ ರಾಜ್ಯಗಳಲ್ಲಿ ಕಂಡು ಬಂದ ಫಲಿತಾಂಶಗಳಿಗಿಂತ ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳ ಫಲಿತಾಂಶಗಳು, ಬಹುತೇಕ ರಾಜಕೀಯ ಪಂಡಿತರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ. read more

Leon Trotsky
ಕನ್ನಡ

ಲಿಯಾನ್ ಟ್ರಾಟ್ಸ್ಕಿ
ನಿರಂತರ ಸಮಾಜವಾದಿ ಕ್ರಾಂತಿಯ ಪರಂಪರೆ

It is 75 years since the assassination of Leon Trotsky, for many in India, that name may not ring any bell, but for those on the left, especially in the ranks of Communist Parties of all varieties, it is used as an acronym of abuse & derision, not ANY MORE!

The Revolutionary Legacy of Leon Trotsky is reverberating in all continents of the earth. The forces of Committee for a Workers’ International-CWI, which draws its ideological inspiration from the indomitable ideas of Marxism & Trotskyism has set foot and has grown deep roots among the Working People in at least 45 countries around the globe. The forces of CWI, through their relentless campaigns and struggles for the victory of Socialism over the present rapacious Capitalism, bring their tributes to this Great Revolutionary on the occasion of the 75th  anniversary of the assassination.

Leon Trotsky, was next to Lenin, the main leader of the Russian Revolution of 1917 and one of the greatest theoreticians of the workers’ movement. His theory of the permanent revolution brilliantly anticipated the class forces involved in the outcome of the Russian revolution, and still conserves its clear validity for the struggle against capitalism and landlordism in the neo-colonial world today. After the bureaucratic degeneration of the Russian Revolution following the isolation of the 1917 revolution, Trotsky became the leading figure of the international Left opposition, which organised the political struggle against Stalinism, and upheld the methods of Marxism and Internationalism. He was assassinated by an agent of Stalin in 1940, just two years after having completed his famous work, “Transitional Programme”, which served as the central document for the founding conference of the 4th International, and from which crucial lessons must be drawn for today’s worldwide struggle of the working class against the capitalist crisis.

Though there are innumerable writings on Trotsky in English and other Europian languages, very few writings are available in the Indian vernacular, we here by attempt one write-up on Trotsky and his ideas in the Language of Kannada. For more English articles on Trotsky’s life & work, please visit socialistworld.net 

 

ಲಿಯಾನ್ ಟ್ರಾಟ್ಸ್ಕಿ

ನಿರಂತರ ಸಮಾಜವಾದಿ ಕ್ರಾಂತಿಯ ಪರಂಪರೆ

1940ರ ಆಗಸ್ಟ್ 20ರಂದು, ಎಪ್ಪತ್ತೈದು ವರುಷಗಳ ಹಿಂದೆ, ಸೋವಿಯತ್ ಒಕ್ಕೂಟದ ಸ್ಟಾಲಿನ್ ನ ಗುಪ್ತಚರದಳ; ಜಿ.ಪಿ.ಯು.ವಿನ ಕೊಲೆಪಾತಕಿ  ರೆಮಾಂಡ್ ಮರ್ಕೆಡಾರ್ , 1917ರ ಕ್ರಾಂತಿಯ ಮೇಧಾವಿ  ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಲಿಯಾನ್ ಟ್ರಾಟ್ಸ್ಕಿ ಯವರ ತಲೆಗೆ ಮಂಜುಗಡ್ಡೆ ಕೆದಕುವ  ಕೈಗುದ್ದಲಿಯ ಪ್ರಹಾರ, ಅಂದಿನ ಅಧಿಕಾರಶಾಹಿ ಸ್ಟಾಲಿನ್ ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ, ವಿಮರ್ಶಕ ಮತ್ತು ಪ್ರಧಾನ ಮಾರ್ಕ್ಸ್ ವಾದಿ ಚಿಂತಕ, ಮಹಾನ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ, ಮರುದಿನ ಆಗಸ್ಟ್ 21ರಂದು ಕೊನೆಯುಸಿರೆಳೆಯ ಬೇಕಾಯಿತು.

ಟ್ರಾಟ್ಸ್ಕಿಯ ಹೆಸರು ಭಾರತದ ಮಟ್ಟಿಗೆ ಬಹುಜನರಿಗೆ ಅಪರಿಚಿತ. ಕಮ್ಯೂನಿಸ್ಟ್ ಪಕ್ಷಗಳ ಕಾರ್ಯಕರ್ತರಿಗೆ ಹಾಗು ಎಡ ವಿಚಾರಧಾರೆಯತ್ತ ಒಲವಿರುವ ಬುದ್ಧಿಜೀವಿಗಳಿಗೆ, ಟ್ರಾಟ್ಸ್ಕಿಯ ಹೆಸರು ಅಕ್ಟೋಬರ್ ಕ್ರಾಂತಿಯ ಸಮಯದ ಖಳನಾಯಕನಾಗಿಯೋ, ಬೊಲ್ಷೆವಿಕ್ ನಾಯಕ ಲೆನಿನ್ನರ ವೈರಿಯೆಂದೋ ಮತ್ತು ಸಮಾಜವಾದದ ಶತ್ರುವೆಂದೋ ಪರಿಚಯಿಸಲಾಗಿದೆ. ಸ್ಟಾಲಿನ್ ಹಾಗು ಅವನ ಅನುಯಾಯಿಗಳು, ಚರಿತ್ರೆ ಹಾಗು ಸತ್ಯತೆಗಳನ್ನು ತಿರುಚುವ ವಿಷಯದಲ್ಲಿ ಅಪ್ರತಿಮ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಲೆನಿನ್ನರ ಬರಹ ಸಂಗ್ರಹದಲ್ಲಿ, ವ್ಯಕ್ತಿ ವಿಚಾರ ಪರಿಚಯ ವಿಭಾಗದಲ್ಲಿ  ಟ್ರಾಟ್ಸ್ಕಿಯನ್ನು ಒಬ್ಬ ಪ್ರತಿಕ್ರಾಂತಿಕಾರಿಯೆಂದೇ ಬಿಂಬಿಸಿದ್ದಾರೆ. ಸ್ಟಾಲಿನ್ರ ಕಾಲದಲ್ಲೂ, ಟ್ರಾಟ್ಸ್ಕಿಯನ್ನು ಲೆನಿನ್ನರ ಪರಮ ವೈರಿಯೆಂದು, ಜನದ್ರೋಹಿಯೆಂಬ ಪಟ್ಟಕಟ್ಟಿ ಗಡಿಪಾರು ಮಾಡಲಾಯಿತು. ಅವರ ವಿಚಾರಗಳತ್ತ ಜನ ಎಲ್ಲಿ ಇಣುಕಿ ನೋಡುತ್ತಾರೋ ಎಂಬ ಭಯದಿಂದ ಅವರ ಬರವಣಿಗೆ ಹಾಗೂ ಪುಸ್ತಕಗಳನ್ನೆಲ್ಲವನ್ನು ಕಾನೂನು ಬಾಹಿರವೆಂದುಘೋಷಿಸಲಾಯಿತು. ಟ್ರಾಟ್ಸ್ಕಿಯವರ ಹಿತೈಷಿಗಳ ಹಾಗೂ ಅವರ ಪರವಾದ ಧೋರಣೆ ಹೊಂದಿದ್ದ ಸಹಸ್ರಾರು ಜನರನ್ನು ಜೈಲಿಗೆ ತಳ್ಳಿ ಕೊಲ್ಲಿಸಲಾಯಿತು. ಪುರಾತನ ಪತ್ರದಾಖಲೆ ಸಂಗ್ರಹಾಲಯಗಳಲ್ಲಿ ಟ್ರಾಟ್ಸ್ಕಿ ಲೆನಿನ್ನರ  ಜೊತೆಗಿದ್ದ ಎಲ್ಲ ಚಿತ್ರಗಳನ್ನೂ ತಿದ್ದುಪಡಿ ಮಾಡಲಾಯಿತು. ಟ್ರಾಟ್ಸ್ಕಿ ಮತ್ತು ಲೆನಿನ್ನರ ನಡುವೆ ನಡೆದ ಅಸಂಖ್ಯಾತ ಪತ್ರ ವ್ಯವಹಾರ, ವಿಷಯ ಭಿನ್ನಾಭಿಪ್ರಾಯಗಳನ್ನು ಅಸಾಂದರ್ಭಿಕವಾಗಿ ಬಳಸಿ,  ಭವಿಷ್ಯದ ಸಮಾಜವಾದಿಗಳಿಗೆ, ಯುವಕರಿಗೆ, ಟ್ರಾಟ್ಸ್ಕಿ ಎಂಬ ಹೆಸರು ಒಬ್ಬ ಪಾತಕಿಯದೇನೋ ಎಂಬಂತೆ ವಿಧಿವತ್ತಾಗಿ ಚಿತ್ರಿಸಲಾಗಿದೆ.

ಕರ್ನಾಟಕ ಹಾಗು ಭಾರತದ ಸಮಾಜವಾದಿ ಹುರಿಯಾಳುಗಳಿಗೆ, ಸ್ಟಾಲಿನ್ವಾದಿ, ಮಾವೋವಾದಿ ಕಮ್ಯುನಿಸ್ಟ್ ಪಕ್ಷಗಳಾದ ಸಿ.ಪಿ.ಐ, ಸಿ.ಪಿ.ಐ(ಎಂ) ಮತ್ತು ಸಿ.ಪಿ.ಐ(ಎಂ.ಎಲ್)ಗಳಲ್ಲಿ ಪೂರ್ವಾಗ್ರಹಗಳಿಗೆ ಗುರಿಯಾಗಿರುವ ನೈಜ ಕಾರ್ಯಕರ್ತರುಗಳಿಗೆ, ಹೋರಾಟಗಾರರಿಗೆ, ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿಯ ಸತ್ಯ-ವಾಸ್ತವ ಚಿತ್ರಣವನ್ನು ಮಾಡಿಸುವುದೇ ಅವರ 75ನೇಯ ವಾರ್ಷಿಕ ಸ್ಮಾರಕೋತ್ಸವದ ಆಚರಣೆ ಎಂಬುದು ಟ್ರಾಟ್ಸ್ಕಿವಾದದ ಅನುಯಾಯಿ ಸಂಘಟನೆಯಾದ ‘ನ್ಯೂ ಸೋಶಿಯಲಿಸ್ಟ್ ಆಲ್ಟರ್ನೇಟಿವ್’(ನವ ಸಮಾಜವಾದಿ ಪರ್ಯಾಯ)ದ ಹಾಗು ‘ದುಡಿಯೋರ ಹೋರಾಟ’ ಪತ್ರಿಕೆಯ ನಿಲುವು. ಟ್ರಾಟ್ಸ್ಕಿಯ 75ನೇ ಸ್ಮಾರಕೋತ್ಸವದ ಈ ಸಂದರ್ಭದಲ್ಲಿ ಅವರ ವಿಚಾರಗಳ ಮತ್ತು ಜೀವನದ ಕೆಲವು ಪ್ರಮುಖ ಸಾಧನೆಗಳನ್ನು ಮೆಲುಕು ಹಾಕಿ ಸಮಕಾಲೀನ ಸಮಾಜವಾದಿ ಹೋರಾಟದ ದಾರಿಗಳನ್ನು ಹುಡುಕುವುದೇ, ಇಂದಿನ ಕ್ರಾಂತಿಕಾರಿ ಸಮಾಜವಾದಿಗಳು ಅವರಿಗೆ ಅರ್ಪಿಸುವ ಶ್ರದ್ಧಾಂಜಲಿ.

1940ರ ಆಗಸ್ಟ್ 21ರ ಟ್ರಾಟ್ಸ್ಕಿಯ ಮರಣಕ್ಕೆ ಕಾರಣನಾದ ಸ್ಟಾಲಿನ್ನರ  ಬಾಡಿಗೆ ಗೂಂಡಾ ರೆಮಾಂಡ್ ಮರ್ಕೆಡಾರ್ನ ಕೈಗುದ್ದಲಿ ಕೇವಲ ಸಾಧಾರಣ ಮೆದುಳೊಂದನ್ನು ಸಿಗಿದಿರಲಿಲ್ಲ. ಬದಲಾಗಿ, ಅಂದಿನ ಸಂದರ್ಭದಲ್ಲಿ ಅಂತರರಾಷ್ಟ್ರೀಯವಾಗಿ ಇಡೀ ಕಾರ್ಮಿಕ ವರ್ಗ ಎದುರಿಸುತ್ತಿದ್ದ ಸಮಸ್ಯೆಗಳನ್ನು ಸಮರ್ಪಕವಾಗಿ ವಿಮರ್ಶಿಸಿ, ಭವಿಷ್ಯಕ್ಕೆ ದಾರಿ ತೋರುತ್ತಿದ್ದ ಜ್ಞಾನಕೇಂದ್ರವನ್ನೇ ನಿರ್ನಾಮ ಮಾಡಿತ್ತು.

ಸ್ಟಾಲಿನ್ ವಾದಿ ‘ಅಪಪ್ರಚಾರಗಳು ಕೆಲವು ಕಾಲ ಕೆಲವರನ್ನು ದಾರಿ ತಪ್ಪಿಸಬಹುದು.
ಆದರೆ ಸದಾಕಾಲ ಸರ್ವರನ್ನು ದಾರಿ ತಪ್ಪಿಸಲಾಗದು’.

“1917ರ ಕ್ರಾಂತಿಯ ಸಂದರ್ಭದಲ್ಲಿ ರಷ್ಯಾದ ಜನರಿಗೆ ಲೆನಿನ್ ಯಾರು? ಟ್ರಾಟ್ಸ್ಕಿ ಯಾರು? ಎಂಬ ವ್ಯತ್ಯಾಸವೇ ತಿಳಿದಿರಲಿಲ್ಲ, ಜಾ಼ರ್ ದೊರೆಯ ಪೊಲೀಸ್ ರಿಂದ ತಪ್ಪಿಸಿಕೊಳ್ಳಲು ಒಬ್ಬನೇ ವ್ಯಕ್ತಿ ಎರಡು ಹೆಸರನ್ನಿಟ್ಟು ಕೊಂಡಿದ್ದಾನೆ ಎಂಬ ಪ್ರತೀತಿ ಜನರಲ್ಲಿತ್ತು. ಏಕೆಂದರೆ ಟ್ರಾಟ್ಸ್ಕಿ ಮತ್ತು ಲೆನಿನ್ನರ  ವಿಚಾರ ಹಾಗೂ ಕಾರ್ಯತಂತ್ರಗಳಲ್ಲಿ ಆ ರೀತಿಯ ಏಕರೂಪತೆ ಇತ್ತು”. ಸೋವಿಯತ್ ಕ್ರಾಂತಿಯಿಂದ ಪ್ರಭಾವಿತನಾದ ಜಾನ್ರೀಡ್ ಎಂಬ ಅಮೇರಿಕನ್ ಪತ್ರಕರ್ತ-ಲೇಖಕ ಈ ರೀತಿಯಾಗಿ ತನ್ನ ಪ್ರಖ್ಯಾತ ಪುಸ್ತಕ “ಟೆನ್ ಡೇಸ್ ದಟ್ ಶುಕ್ ದಿ ವರ್ಲ್ಡ್”ನಲ್ಲಿ ಉಲ್ಲೇಖಿಸಿದ್ದಾನೆ.

1917ರ ಅಕ್ಟೋಬರ್ ಕ್ರಾಂತಿಯ ಪೂರ್ವದಲ್ಲಿ ಹಾಗು ಕ್ರಾಂತಿಯ ನಂತರ ಟ್ರಾಟ್ಸ್ಕಿ ವಹಿಸಿದ ಪಾತ್ರ ಹಾಗು ಅವರಿಗೆ ಲೆನಿನ್ ವಹಿಸಿದ ಜವಾಬ್ದಾರಿಗಳನ್ನು ಪಟ್ಟಿ ಮಾಡಿದಲ್ಲಿ ಸ್ಟಾಲಿನ್ವಾದಿಗಳ ಹಸಿಸುಳ್ಳುಗಳು ಎಂಥಹ ಹೇಯವಾದದ್ದು ಎಂಬುದನ್ನು ಸಾಬೀತು ಪಡಿಸಬಹುದು.

  • 1905-1906ರ ಮೊದಲನೆಯ ರಷ್ಯನ್ ಕ್ರಾಂತಿಯ ಸಂದರ್ಭದಲ್ಲಿ ಪ್ರಪ್ರಥಮ ಸೋವಿಯತ್ ನ (ಕಾರ್ಮಿಕವರ್ಗದ ಪ್ರತಿನಿಧಿಗಳ ಸಮಿತಿ) ಸಭಾಧ್ಯಕ್ಷ ಟ್ರಾಟ್ಸ್ಕಿ.
  • 1917ರಲ್ಲಿ ಮಾನವ ಚರಿತ್ರೆಯಲ್ಲೇ ಮೊದಲನೇ ಬಾರಿ ನಡೆದ ಏಕೈಕ ಮಹಾನ್ ಘಟನೆ ರಷ್ಯನ್ ಕ್ರಾಂತಿಯ ಪ್ರಮುಖ ಸಂಘಟನಾಕಾರರಲೊಬ್ಬ ಟ್ರಾಟ್ಸ್ಕಿ.
  • ತದನಂತರ ರಷ್ಯನ್ ಕ್ರಾಂತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕೆಂಬ ಹುನ್ನಾರ ಮಾಡಿ ದಂಡೆದ್ದು ಬಂದಿದ್ದ 21 ಸಾಮ್ರಾಜ್ಯಶಾಹಿ ದೇಶಗಳ  ಪ್ರತಿಕ್ರಾಂತಿಕಾರಿ ಸೇನೆಗಳನ್ನು ಸೋಲಿಸಿದ ಕೆಂಪು ಸೇನೆಯನ್ನು ಕಟ್ಟಿ ಅದರ ನೇತೃತ್ವ ವಹಿಸಿದ ಕ್ರಾಂತಿಕಾರಿ ಟ್ರಾಟ್ಸ್ಕಿ.
  • read more

    ಕನ್ನಡ

    ಬಂಡವಾಳಿಗಳ ಥಳುಕು ಜನತಂತ್ರ

    demo

    ಇದು ಸರಾಸರಿ ಅನ್ಯಾಯ. ಈ ದೇಶದ ಆಳುವ ವರ್ಗಕ್ಕೆ ಚರಿತ್ರೆಯ ಮತ್ತು ಭವಿಷ್ಯದ ಅರಿವು ಮತ್ತು ಕಾಳಜಿಗಳಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ಎಂದು ಬೀಗಿ ಬೊಬ್ಬೆಇಡುವ ಇವರಿಗೆ ಕನಿಷ್ಠ ಜನತಾಂತ್ರಿಕ ರೀತಿರಿವಾಜುಗಳ ಪರಿಚಯವಿಲ್ಲ. ಅಫ್ಜಲ್ ಗುರು ಮೊಕದ್ದಮೆಯನ್ನು ನ್ಯಾಯಾಲಯಗಳಲ್ಲಿ ನಡೆಸಿದ ರೀತಿ, ಅವರಿಗೆ ಸಿಕ್ಕ ನ್ಯಾಯದ ಅವಕಾಶಗಳು , ಮತ್ತು ಮೊಕದ್ದಮೆಗೆ ಮುಂಚೆಯೇ ಹೇಗೆ ಅವರಿಗೆ ಮಾಧ್ಯಮಗಳಿಂದ ಪ್ರೇರೇಪಿತ ತೀರ್ಪು ನೀಡಲಾಗಿತ್ತು ಎಂಬುದು ಈಗ ಸರ್ವವಿದಿತ. ಅವರ ಕುಟುಂಬ ಹಾಗು ಆಪ್ತರಿಗೆ ಶವಸಂಸ್ಕಾರದ ಅವಕಾಶವನ್ನೂ ನಿರಾಕರಿಸಿರುವುದು, ಈ ದೇಶದ ಆಳುವವರ್ಗಗಳಿಗೆ ಜನತಂತ್ರದ ಬಗ್ಗೆ ಇರುವ ಬದ್ಧತೆಯನ್ನು ಪ್ರಶ್ನಿಸುತ್ತದೆ. read more