ಭಾರತ ಸೇನೆಯ ವಿಶೇಷ ಅಧಿಕಾರ ಕೊನೆಯಾಗಲಿ

ಈ ತಿಂಗಳ ನವೆಂಬರ್ 4ರಂದು, ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನುರವರ ಉಪವಾಸ ಸತ್ಯಾಗ್ರಹಕ್ಕೆ ಹನ್ನೊಂದು ತುಂಬಿತು. ಅಂದಿನಿಂದ ಇಂದಿನವರೆಗೆ ಈ ಅಪ್ರತಿಮ ಹೋರಾಟಗಾರ್ತಿ ಯಾವುದೇ ಆಹಾರ-ಪಾನೀಯಗಳನ್ನು ಮುಟ್ಟಿಲ್ಲ, ಆಕೆಯನ್ನು ಆತ್ಮಹತ್ಯೆಗೆ ಪ್ರಯತ್ನಪಟ್ಟ ಆರೋಪದ ಮೇಲೆ ಬಂಧನದಲ್ಲಿರಿಸಿ, ಬಲವಂತದಿಂದ ಮೂಗಿನ ಮೂಲಕ ದ್ರವವನ್ನು ನೀಡಲಾಗುತ್ತಿದೆ. ಜಗತ್ತಿನ ಯಾವುದೇ ದೇಶದ ಹೋರಾಟದ ಚರಿತ್ರೆಯಲ್ಲು ಈ ಮಟ್ಟದ ಸುಧೀರ್ಘ ಅಖಂಡ ಉಪವಾಸ ಹಾಗು ನೋವುಂಡಿರುವ ಹೋರಾಟಗಾರ/ಗಾರ್ತಿಯರ ನಿದರ್ಶನವಿಲ್ಲ. ಇಂದು ಇರೋಮ್ ಶರ್ಮಿಳಾ ಜಾಗತಿಕ ಮಟ್ಟದಲ್ಲಿ ನ್ಯಾಯಕ್ಕಾಗಿ ನಡೆವ ಹೋರಾಟದ ವಿಶಿಷ್ಟ ಪ್ರತೀಕವಾಗಿದ್ದಾರೆ.

ಅಮಾಯಕ ಜನರ ಜೀವ ಉಳಿಸಲಿಕ್ಕಾಗಿ ಶರ್ಮಿಳಾ ಇರೋಮ್ರ ಈ ಹೋರಾಟವನ್ನು ಬೆಂಬಲಿಸಿ

ಈ ಹೋರಾಟಕ್ಕೆ ಕಾರಣವೇನು?

ಶರ್ಮಿಳಾರದ್ದು ಸರಳ ಹಾಗು ಮಾನವೀಯ ಬೇಡಿಕೆ: ಸೇನೆಗೆ ನೀಡಿರುವ ವಿಶೇಷ ಅಧಿಕಾರ ನೀಡಿರುವ AFSPA ಕೊನೆಗೊಳಿಸಿ ಂಈಖಕಂ ಯ ದೌರ್ಜನ್ಯ ಕೇವಲ ಮಣಿಪುರಕ್ಕೆ ಸೀಮಿತವಾಗಿಲ್ಲ, ಇಡೀ ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲೂ ಈ ಕಾಯಿದೆಯಿಂದಾಗಿ ಅಲ್ಲಿನ ಅಮಾಯಕ ಜನಸ್ತೋಮ ತತ್ತರಿಸಿದೆ. ಂಈಖಕಂ ವಿಶೇಷ ಅಧಿಕಾರದಿಂದಾಗಿ ಸೇನಾ ಪಡೆಗಳು ಕೇವಲ ಸಂದೇಹ ಮಾತ್ರಕ್ಕೆ ಯಾರ ಮನೆಗಾದರೂ ನುಗ್ಗಿ ದಾಂಧಲೆ ಎಬ್ಬಿಸಿ, ಬಂಧಿಸುವ ಗುಂಡಿಕ್ಕಿ ಕೊಲ್ಲುವ ಅಮಾನುಷ ಬಲವನ್ನು ಪಡೆದಿದೆ. ಸೇನಾ ಪಡೆಗಳಿಗೆ ಯಾವುದೇ ಅಪಾಯ ವಿಲ್ಲದಿದ್ದರೂ ಈ ರೀತಿಯ ಕ್ರೂರ ಬಲದಿಂದಾಗಿ, ಅಲ್ಲಿನ ಮಹಿಳೆ, ಎಳೆಯರು ಹಾಗು ತರುಣ-ತರುಣಿಯರು ಲೈಂಗಿಕ ದೌರ್ಜನ್ಯ ಹಾಗು ಬಲಾತ್ಕಾರಗಳಿಗೆ ತುತ್ತಾಗುತ್ತಲೇ ಇದ್ದಾರೆ. ಈ ವಿಶೇಷ AFSPA ಕಾಯಿದೆ ಯಿಂದಾಗಿ, ಇಲ್ಲಿ ಭಾರತದ ಸೇನೆಯ ಕ್ರೌರ್ಯವನ್ನು ಪ್ರಶ್ನಿಸುವ ಹಾಗು ನ್ಯಾಯ ಕೇಳುವ ಯಾವುದೇ ಶಾಸನಬದ್ಧ ಮಾರ್ಗಗಳೂ ಇಲ್ಲವಾಗಿದೆ. ಇದರಿಂದಾಗಿ, ಕಾಣೆಯಾಗುವಿಕೆ, ಬಂಧನದಲ್ಲಿ ಹಿಂಸೆ, ಬಲಾತ್ಕಾರ, ದರೋಡೆ ಹಾಗು ಎನ್ಕೌಂಟರ್ ಸಾವುಗಳು ದಿನನಿತ್ಯ ನಡೆಯುವ ಸಾಮಾನ್ಯ ಸಂಗತಿಯಾಗಿದೆ. ಇರೋಮ್ ಶರ್ಮಿಳಾ ಈ ರೀತಿಯ ದೌರ್ಜನ್ಯದ ಪ್ರತ್ಯಕ್ಷದರ್ಶಿ, 2000 ನವೆಂಬರ್ 2ರಂದು ಭಾರತದ ಸೇನೆ ಮಾಲೋಮ್ ಪಟ್ಟಣದಲ್ಲಿ ನಡೆಸಿದ 10 ಜನರ ಕಗ್ಗೊಲೆಯ ವಿರುದ್ಧ ಸೆಟೆದು “AFSPA ಕೊನೆಗೊಳಿಸಿ” ಎಂಬ ಬೇಡಿಕೆ ಮುಂದಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದರು.

AFSPA ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅನಿಷ್ಟ ಬಳುವಳಿ, ಈಶಾನ್ಯ ರಾಜ್ಯಗಳ ಮತ್ತು ಮಣಿಪುರದ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ದಂಗೆಕೋರರ ಹುಟ್ಟಿಗಿಂತಲೂ ಮುಂಚೆ ಬಂದ ಕಾಯಿದೆ ಇದು. ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದಿರಲಿ, 50 ವರುಷಗಳ ನಂತರ 30ಕ್ಕೂ ಹೆಚ್ಚು ಸಶಸ್ತ್ರ ದಂಗೆಕೋರ ಗುಂಪುಗಳನ್ನು ಈ ಕಾಯಿದೆಯೇ ಹುಟ್ಟುಹಾಕಿದೆ. ಜಗತ್ತಿನ ಎರಡನೇಯ ಅತಿ ದೊಡ್ಡ ಸೇನೆ ಹೊಂದಿದೆಯೆಂದು ಬೀಗುವ ಭಾರತದ ರಾಜ್ಯಯಂತ್ರ, ಕೇವಲ ಬೆರಳೆಣಿಕೆಯಷ್ಟಿರುವ ಗುಂಪುಗಳನ್ನು ಹತ್ತಿಕ್ಕಲಾಗದಿರುವುದು ಈ ಬೃಹತ್ ಸೇನೆಯ ಔಚಿತ್ಯವನ್ನೇ ಪ್ರಶ್ನಿಸುತ್ತದೆ. ವಿವಿಧ ರಾಷ್ಟ್ರೀಯತೆಯ ಸವಾಲುಗಳನ್ನು ಎದುರಿಸಿ ಬಗೆಹರಿಸುವಲ್ಲಿ ಭಾರತದ ಆಳುವ ವರ್ಗ ಸಂಪೂರ್ಣವಾಗಿ ವಿಫಲವಾಗಿದೆ. ರಾಜಕೀಯ ಸಮಸ್ಯೆಗಳನ್ನು, ಪುಂಡರನ್ನು ಮಟ್ಟ ಹಾಕುವಂತೆ ಪರಿಗಣಿಸಿ, ಬಂದೂಕಿನ ಮೂಲಕ ಪರಿಹಾರ ಹುಡುಕುವ ಭಾರತದ ಆಳುವ ವರ್ಗ ಇಡೀ ದೇಶವನ್ನು ವಸಾಹತುವನ್ನಾಗಿ ಮಾಡಿಕೊಂಡಿದೆ. ಈಶಾನ್ಯ ರಾಜ್ಯಗಳಲ್ಲಂತೂ, ಸೇನೆಯ ಪ್ರಮಾಣ ಇರಾಕ್ ಅಥವಾ ಅಫ್ಘನೀಸ್ತಾನದಲ್ಲಿನ ಸೇನಾ ಪಡೆಗಳ ಸಾಂದ್ರತೆಗಿಂತ ಹೆಚ್ಚಿದೆ. ಕೇವಲ 25 ಲಕ್ಷ ಜನಸಂಖ್ಯೆಯ ಈ ಪ್ರದೇಶಕ್ಕೆ 55 ಸಾವಿರಕ್ಕೂ ಹೆಚ್ಚು ಸೇನಾ ಪಡೆಗಳನ್ನು ಜಮಾಯಿಸಲಾಗಿದೆ.

ಧೀರ್ಘಕಾಲದ AFSPA ಅಮಾನುಷ ಕಾಯಿದೆಯಿಂದಾಗಿ, ಮಣಿಪುರ, ಈಶಾನ್ಯ ರಾಜ್ಯಗಳ ಮತ್ತು ಕಾಶ್ಮೀರದ ಅಮಾಯಕ ಜನತೆ ನಾವ್ಯಾರು ಕೇಳರಿಯದ ದೌರ್ಜನ್ಯ ಹಾಗು ಕ್ರೌರ್ಯಗಳಿಗೆ ಶಿಕಾರಿ ಯಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ, ನಾಡಿನಾದ್ಯಂತ ಶರ್ಮಿಳಾರವರನ್ನು ಬೆಂಬಲಿಸಿ ಂಈಖಕಂ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆದಿವೆ. ಶರ್ಮಿಳಾರವರ ಸತ್ಯಾಗ್ರಹ ಮತ್ತು ಉಪವಾಸ ಈಗಾಗಲೆ 12ನೇ ವರುಷಕ್ಕೆ ಕಾಲಿಟ್ಟಿದೆ, ಅವರನ್ನು ಬೆಂಬಲಿಸಿ ಹಾಗು ಂಈಖಕಂ ಹಿಮ್ಮೆಟ್ಟುವುದಕ್ಕಾಗಿ ನಮ್ಮ ಹೋರಾಟದ ಪ್ರಯತ್ನಗಳು ಇಮ್ಮಡಿಗೊಂಡು ತೀವ್ರವಾಗಬೇಕಿದೆ. ಈಶಾನ್ಯದ ಮಣಿಪುರ ಹಾಗು ಇನ್ನಿತರ ರಾಜ್ಯಗಳಲ್ಲಿ ಮತ್ತು ಕಾಶ್ಮೀರಗಳಲ್ಲಿ ದಮನ ಮಾಡುತ್ತಿರುವ ಂಈಖಕಂ ಪೋಷಿತ ಸೇನೆಗೆ ಖರ್ಚಾಗುತ್ತಿರುವ ಹಣ, ನಮ್ಮ- ನಿಮ್ಮಿಂದ ವಸೂಲದ ಟ್ಯಾಕ್ಸ್ ದುಡ್ಡಿನಿಂದಲೇ, ಈ ಪ್ರದೇಶಗಳಿಂದ ಹೊರಗಿರುವ ನಮ್ಮೆಲ್ಲರ ಅಕ್ಷಮ್ಯ ಅಪರಾಧವಾದ ಮೌನಪ್ರೇಕ್ಷಕ ಪ್ರವೃತ್ತಿಯಿಂದಾಗಿ, ಇಂದು 12 ವರುಷಗಳ ಉಪವಾಸದ ಧೀರ್ಘ ಶಿಕ್ಷೆಯನ್ನು ಶರ್ಮಿಳಾರವರು ಅನುಭವಿಸುತ್ತಿದ್ದಾರೆ. ಮೌನವನ್ನು ಮುರಿವ ಕಾಲ ಇದೀಗ ಬಂದಿದೆ, ನಮ್ಮೆಲ್ಲರ ಒಕ್ಕೊರಲಿನ ಕೂಗು ದೆಹಲಿಯ ಸರ್ಕಾರವನ್ನು ಬಡಿದೆಬ್ಬಿಸಬೇಕಿದೆ.

ಜಗದೀಶ್ ಜಿ ಚಂದ್ರ.