‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ.

ಆದಿವಾಸಿ ಹಕ್ಕುಗಳಿಗಾಗಿ ಹೋರಾಟ

ಜಾಗತೀಕಣದ ಸದ್ಯದ ಪರಿಸ್ಥಿತಿಯಲ್ಲಿ, ಆದಿವಾಸಿಗಳು ಎದುರಿಸುತ್ತಿರುವ ಕಷ್ಟಗಳನ್ನು ಇತರೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಸಮುದಾಯಗಳು ಕೂಡ ಅನುಭವಿಸುತ್ತಿರುವುದು ವಾಸ್ತವ. ಸರ್ಕಾರ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಧಾಳಿಯಿಟ್ಟಿರುವ ಕಾರಣದಿಂದ ನೈಸರ್ಗಿಕ ಸಂಪನ್ಮೂಲಗಳು ನಂಬಿಕೊಂಡಿರುವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಮ್ಮ ನೀರಿನ ಮೂಲಗಳು, ಭೂಮಿ, ಅರಣ್ಯಗಳು ಹಾಗೂ ಸಮುದಾಯದ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಾವಿಂದು ಹೊಸದೊಂದು ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿದ್ದೇವೆಂದು ಹೇಳಬಹುದಾಗಿದೆ.

ಇತ್ತೀಚೆಗೆ ‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ ಮಡಿಕೇರಿಯ ಕುಶಾಲನಗರದಲ್ಲಿ ನಡೆಯಿತು.

ಈ ಸಮಾವೇಶದಲ್ಲಿ ಸ್ಥಳೀಯ ಆದಿವಾಸಿಗಳು ಸೇರಿದಂತೆ ದೇಶದಾದ್ಯಂತ ಇರುವ ಆದಿವಾಸಿ ಸಂಘಟನೆ, ಮೀನುಗಾರ ಸಂಘಟನೆ, ದಲಿತ ಸಂಘಟನೆ, ಅರಣ್ಯ ಕಾರ್ಮಿಕರ ಸಂಘಟನೆ, ಮಹಿಳೆ ಮತ್ತು ಮಕ್ಕಳ ಸ್ವಯಂ ಸೇವಾ ಸಂಸ್ಥೆಗಳ ನೂರಾರು ಮಂದಿ ಪ್ರತಿನಿಧಿಗಳು ಭಾಗವಹಿಸಿದರು.

ಸುಮಾರು 15 ರಾಜ್ಯಗಳಿಂದ ವಿವಿಧ ಸಮುದಾಯದವರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಒಕ್ಕೊರಲಿನಿಂದ ಒತ್ತಾಯಿಸಿದರು.

ಅಲ್ಲದೇ ಈ ರೀತಿಯ ಸಮಾವೇಶಗಳನ್ನು ಮಾಡುವುದರ ಮೂಲಕ ಸಮುದಾಯದವರ ಹಕ್ಕುಗಳ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡವನ್ನು ಹೇರುವುದು ಈ ಸಂಗಮದ ಉದ್ದೇಶವೆಂದು ತಿಳಿಸಲಾಯಿತು.
ಸರ್ಕಾರ ಮತ್ತು ಬಹುರಾಷ್ಟ್ರೀಯ- ದುಡಿಯೋರ ಹೋರಾಟದ ವರದಿ. ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ದಾಳಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.

ಆದಿವಾಸಿಗಳ, ಬುಡಕಟ್ಟು ಜನಾಂಗದವರ ಸಂಪನ್ಮೂಲಗಳಾದ ಭೂಮಿ, ನೀರು ಮತ್ತು ಅರಣ್ಯದ ಮೇಲೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕುಗಳ ಬಗ್ಗೆ ಹೋರಾಟ ನಡೆಸಲು ಈ ಸಂಗಮ, ಸಮಾವೇಶದಲ್ಲಿ ಕರೆಯನ್ನು ನೀಡಲಾಯಿತು.

ಈ ಸಮಾವೇಶದ ಉದ್ದೇಶಗಳು ಮತ್ತು ಹಕ್ಕೋತ್ತಾಯಗಳು :

* ಪ್ರಾಕೃತಿಕ ಸಂಪನ್ಮೂಲ ಮತ್ತು ಸಮುದಾಯ ಹಕ್ಕುಗಳ ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಜನ ಸಂಘಟನೆಗಳ ಸಂಪರ್ಕ ಸಾಧಿಸುವುದು.
* ಸಮುದಾಯ ಹಕ್ಕುಗಳು ಮತ್ತು ಜೀವನಾಧಾರ ಸಮಸ್ಯೆಗಳ ಮೇಲೆ ಹೋರಾಡುತ್ತಿರುವ ಜನಸಂಘಟನೆಗಳ ಬೇಡಿಕೆಗಳು ಸಂಬಂಧಪಟ್ಟವರಿಗೆ ತಲುಪುವಂತೆ ವಿಸ್ತೃತಗೊಳಿಸುವುದು.
* ಸಮುದಾಯ ಹಕ್ಕುಗಳಿಗಾಗೆ ಹೋರಾಡುವವರಿಗೆ ಸಹಕರಿಸುವುದು.
* ಮಾಧ್ಯಮ, ಇಂಟರ್ನೆಟ್ ಸಂಪರ್ಕ ಮತ್ತು ಇನ್ನಿತರ ಮಾಧ್ಯಮಗಳ ಮೂಲಕ ಮುಖ್ಯವಾಹಿನಿಯ ಸಹಕಾರವನ್ನು ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಮುದಾಯ ಹಕ್ಕುಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವಂತೆ ಸಹಕಾರವನ್ನುಂಟು ಮಾಡುವುದು.
* ಸಮುದಾಯಗಳಿಗೆ ನೈಸರ್ಗಿಕ ಸಂಪನ್ಮೂಲ ಮತ್ತು ಜೀವನ ನಿರ್ವಹಣೆಯ ಮೇಲಿನ ಹಕ್ಕುಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡವನ್ನು ತರುವುದು.
* ಸಮುದಾಯದ ಕಾಳಜಿಯನ್ನು ದಾಖಲಿಸುವುದು ಮತ್ತು ಸಮುದಾಯದ ಹಕ್ಕುಗಳ ಬಗ್ಗೆ ಮುಂದಿನ ಕಾರ್ಯಯೋಜನೆ.

– ದುಡಿಯೋರ ಹೋರಾಟದ ವರದಿ.